ಶ್ರೀ. ಗಣಪತಿ ದೇವರ ವಿಗ್ರಹ ಲೋಕಾರ್ಪಣೆ
ದೇವಾಡಿಗ ಸಂಘ (ರಿ) ಬೆಂಗಳೂರು
ಶುಭ ಕೃತ ನಾಮಸಂವತ್ಸರ ಗ್ರೀಷ್ಮ ಋತು ಆಷಾಡ ಶುಕ್ಲ ಪೂರ್ಣಿಮೆ ದಿನಾಂಕ: 13-07-2022 ಬುಧವಾರ, ಗುರುಪೂರ್ಣಿಮೆಯ ದಿನದಂದು ಬೆಳಗ್ಗೆ 9.30-10.30 ಘಂಟೆಗೆ ಶ್ರೀ. ಗಣಪತಿ ದೇವರ ವಿಗ್ರಹ ಲೋಕಾರ್ಪಣೆಗೊಂಡಿತು.
ಹಿಂದಿನ ದಿನ ದಿನಾಂಕ: 12-07-2022ರ ಸಂಜೆ 6.30 ಯಿಂದ ಪ್ರಾರಂಭವಾದ ಪೂಜಾಹೋಮಗಳನ್ನು ವಿಪ್ರರಾದ ಶ್ರೀ. ಗೋಪಾಲಕೃಷ್ಣ ಭಟ್ ಹಾಗು ತಂಡದವರು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ಹಾಗು ದೇವಾಡಿಗ ಸಂಘ (ರಿ) ಬೆಂಗಳೂರು ವತಿಯಿಂದ ಪೂಜಾಹವನಗಳ ಕೈಂಕರ್ಯದಲ್ಲಿ ನಮ್ಮ ಸಂಘದ ಅಧ್ಯಕ್ಷರಾದ ಮತ್ತು ಶ್ರೀ. ಚಂದ್ರಶೇಖರ್. ಕೆ ಹಾಗು ಶ್ರೀಮತಿ. ಗಾಯತ್ರಿ ಚಂದ್ರಶೇಖರ್ ಭಾಗವಹಿಸಿದರು. ವಿಶೇಷವಾಗಿ ಯುವ ದಂಪತಿ ಶ್ರೀ. ತೇಜಸ್ ಸುಧಾಕರ್ ಮತ್ತು ಶ್ರೀಮತಿ. ಅರ್ಪಿತ ತೇಜಸ್ ಹಾಗು ಕಾರ್ಯಕಾರಿ ಸಮಿತಿ ಸದಸ್ಯರು ಎಲ್ಲರೂ ಉತ್ಸಾಹದಿಂದ ಪಾಲುಗೊಂಡರು.
ಬೆಳಗ್ಗೆ ದಿನಾಂಕ: 13-07-2022 ರಂದು ಆರಂಭವಾದ ಪ್ರತಿಷ್ಠಾಪನಾ ಹವನಗಳು ಗೋಪೂಜೆ, ಗಂಗಾ ಪೂಜೆ, ಗಣಪತಿ ಅಭಿಷೇಕ ವೇದಮಂತ್ರಗಳ ಉಚ್ಚಾರಣೆಯೊಂದಿಗೆ ಮುಂದುವರಿಯಿತು. ತದನಂತರ ದೇವರ ಅಲಂಕಾರ ಮತ್ತು 9.30 ಘಂಟೆ ಸಂದರ್ಭದಲ್ಲಿ ವಿದ್ಯುಕ್ತವಾಗಿ ಶ್ರೀ ಗಣಪತಿ ದೇವರನ್ನು ಪ್ರತಿಷ್ಠಾಪಿಸಲಾಯಿತು.
ಈ ಎಲ್ಲ ಧಾರ್ಮಿಕ ಸಂದರ್ಭಗಳನ್ನು ವೀಕ್ಷಿಸಲು ಆಗಮಿಸಿದ, ನಮ್ಮ ಪ್ರಿಯ ನಾಯಕರಾದ ಶ್ರೀ. ವೀರಪ್ಪ ಮೊಯಿಲಿ ರವರು ದೇವರ ಪ್ರತಿಷ್ಠಾಪನೆ ಕೈಂಕರ್ಯದಲ್ಲಿ ಪಾಲುಗೊಂಡರು. ಹಾಗೆ ಮುಂಬೈಯಿಂದ ನಮ್ಮವರಾದ ಶ್ರೀ ಧರ್ಮಪಾಲ್ ದೇವಾಡಿಗ, ಅಧ್ಯಕ್ಷರು, ಅಖಿಲ ಭಾರತ ತುಳುಕೂಟ, ಶ್ರೀ. ಅಣಯ್ಯ ಶೇರಿಗಾರ್, ವಿಶ್ವಸ್ತರು ಹಾಗು ಅಧ್ಯಕ್ಷರು, ಏಕನಾಥೇಶ್ವರಿ ದೇವಸ್ಥಾನ ಆಡಳಿತ ಮಂಡಳಿ, ಬಾರಕೂರು, ವಿಶ್ವಸ್ತರುಗಳಾದ, ಶ್ರೀ. ಮೋಹನ್ ದಾಸ್ ಹಿರಿಯಡ್ಕ, ಶ್ರೀ. ಜನಾರ್ಧನ್ ದೇವಾಡಿಗ, ಬಾರಕೂರು,
ಶ್ರೀ. ಜನಾರ್ಧನ್, ಉಪುಂದ ದೇವರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲುಗೊಂಡರು. ಶ್ರೀ ರವಿ ದೇವಾಡಿಗ, ಅಧ್ಯಕ್ಷರು, ದೇವಾಡಿಗ ಸಂಘ, ಮುಂಬೈ, ಶ್ರೀ. ವಿಜಯ್ ಕೊಡವೂರು ನಗರ ಸಭೆ ಸದಸ್ಯರು, ಉಡುಪಿ
ಶ್ರೀ. ರತ್ನಾಕರ್, ಶ್ರೀ. ಬಿ ಆರ್.ದೇವಾಡಿಗ, ಶ್ರೀ. ಶಂಕರ್ ದೇವಾಡಿಗ, ಹೆಬ್ರಿ ಹಾಗು ಶ್ರೀ ನಾಗರಾಜ್ ಪಡುಕೋಣೆ ಕೂಡ ಉಪಸ್ಥಿತರಿದ್ದರು.
ನಂತರ ನಡೆದ, ಸಭಾ ಕಾರ್ಯಕ್ರಮದಲ್ಲಿ ಶ್ರೀ. ಕೆ. ಚಂದ್ರಶೇಖರ್ ಎಲ್ಲರನ್ನು ಸ್ವಾಗತಿಸಿದರು.
ಶ್ರೀ. ವೀರಪ್ಪ ಮೊಯಿಲಿ ಮಾತನಾಡುತ್ತಾ ಬೆಂಗಳೂರು ನಗರದಲ್ಲಿ ದೇವಾಡಿಗ ಸಂಘ ಸ್ಥಾಪನೆ ಮಾಡಿದ ಹಿರಿಯರನ್ನು ನೆನೆಪಿಸಿಕೊಂಡರು. ವೇದಿಕೆ ಮೇಲಿರುವ ಅಥಿತಿಗಳು ಶೀಘ್ರದಲ್ಲಿ ನಮ್ಮ ಸಮುದಾಯ ಭವನದ ಕಾಮಗಾರಿ ಸಂಪೂರ್ಣಗೊಳಿಸಲೆಂದು ಹಾರೈಸಿದರು ಹಾಗು ಸಂಪೂರ್ಣ ಸಹಕಾರ ನೀಡುದಾಗಿ ಸೂಚಿಸಿದರು.
ದೇವಸ್ಥಾನದ ಗರ್ಭ ಗುಡಿ ನಿರ್ಮಾಣದ ಸಂದರ್ಭದಲ್ಲಿ ಕಾಮಗಾರಿಯನ್ನು ಸಂಪೂರ್ಣನಗೊಳಿಸಲು