INDEPENDENCE DAY 2022
ದೇವಾಡಿಗ ಸಂಘ (ರಿ) ಬೆಂಗಳೂರು
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇವಾಡಿಗ ಸಂಘ (ರಿ) ಬೆಂಗಳೂರು ದಿನಾಂಕ: 15, ಆಗಸ್ಟ್ 2022 ರಂದು ತ್ರಿವರ್ಣ ದ್ವಜ ಆರಿಸುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸ್ಪರ್ಶ್ ಹಾಸ್ಪಿಟಲ್, ಡಾ. ಕಿರಣ್ ಕುಮಾರ್ ಬಿ.ಆರ್ , ಮೆಡಿಕಲ್ ಡೈರೆಕ್ಟರ್, ಎಸ್. ಎಸ್. ಹಾಸ್ಪಿಟಲ್, ರಾಜರಾಜೇಶ್ವರಿ ದ್ವಜಾರೋಹಣ ಬೆಳಿಗ್ಗೆ 8.30 ನಡೆಸಿಕೊಟ್ಟರು. ಅವರು ತಮ್ಮ ಭಾಷಣದಲ್ಲಿ ನಮ್ಮ ಸಮಾಜದ ಬಡವರಿಗೆ ಆರೋಗ್ಯ ತಪಾಸಣೆಯನ್ನು ಆಸ್ಪತ್ರೆಯ ವತಿಯಿಂದ ರಿಯಾಯಿತಿ
ದರದಲ್ಲಿ ಕಾರ್ಡ್ ನೀಡುವುದಾಗಿ ತಿಳಿಸಿದರು. ಶ್ರೀ. ಹಚ್. ಎಸ್. ದೇವಾಡಿಗ ಮಾತನಾಡಿ ಸ್ವಾತಂತ್ರ್ಯ ದಿವಸದ ಹಾರ್ದಿಕ ಶುಭ ಕೋರಿದರು. ಅಧ್ಯಕ್ಷರಾದ, ಶ್ರೀ. ಕೆ. ಚಂದ್ರಶೇಖರ್ 75 ವರ್ಷದಲ್ಲಿ ದೇಶದಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಪ್ರಸ್ತಾಪ ಮಾಡಿದರು. ಶ್ರೀ ಸದಾಶಿವ್ ದೇವಾಡಿಗ, ಅಧ್ಯಕ್ಷರು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪಕ್ಷ ಪಾಲುಗೊಂಡಿದ್ದು ವಿಶೇಷ.
ಈ ಸಂದರ್ಭದಲ್ಲಿ ಉಪಾಧ್ಯಕ್ಷರುಗಳಾದ ಶ್ರೀ. ರಮೇಶ್ ವಂಡ್ಸೆ , ಶ್ರೀ. ಎಂ. ಸುಧಾಕರ್ ಹಾಗು ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಶ್ರೀ. ಎಸ್. ಎಂ. ಚಂದ್ರ, ಜೊತೆ ಕಾರ್ಯದರ್ಶಿಗಳಾದ ಗಣೇಶ್ ದೇವಾಡಿಗ, ರಂಜಿತ್ ದೇವಾಡಿಗ, ಪವನೇಶ್ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಮತ್ತು ಮಹಿಳಾ ಘಟಕದ, ಅಧ್ಯಕ್ಷರು ಶ್ರೀಮತಿ. ರೇಖಾ ಸುರೇಶ ಮತ್ತು ಯುವ ಘಟಕದ, ಅಧ್ಯಕ್ಷರು ಶ್ರೀ ಶಿವಶಂಕರ್ ದೇವಾಡಿಗ ಉಪಸ್ಥಿತರಿದ್ದರು.
ಶ್ರೀಮತಿ. ಅರ್ಪಿತಾ ತೇಜಸ್ ವಂದನಾರ್ಪಣೆ ಮಾಡಿದರು. ಉಪಹಾರದ ವ್ಯವಸ್ಥೆಯನ್ನು ಮಾಡಿದ ಶ್ರೀಧರ್ ದೇವಾಡಿಗ, ಶ್ರೀ ರಾಮಚಂದ್ರ ದೇವಾಡಿಗ ಮತ್ತು ಶ್ರೀ. ತೇಜಸ್ ಸುಧಾಕರ್ ರಿಗೆ ಹಾಗು ಈ ಸಂದರ್ಭದಲ್ಲಿ ಸಹಕರಿಸಿದ ಶ್ರೀ. ಸತೀಶ್ ನಾರಾಯಣ್ ರಾವ್ ರಿಗೂ ಧನ್ಯವಾದ ಅರ್ಪಿಸಲಾಯಿತು.
ಆಗಮಿಸಿದ ಎಲ್ಲ ಸಮಾಜ ಬಾಂಧವರಿಗೆ ಧನ್ಯವಾದ.
ರಜನಿಕಾಂತ್ ಎಸ್ ಕುಡ್ಪಿ
ಪ್ರದಾನ ಕಾರ್ಯದರ್ಶಿ,
ದೇವಾಡಿಗ ಸಂಘ (ರಿ) ಬೆಂಗಳೂರು.
All reactions: