ತುಳುನಾಡಿನ ಆಟಿ ಕಳಂಜ “ ಸುರಿಯುವ ಮಳೆಯ ಆಟಿ (ಆಷಾಢ) ತಿಂಗಳೆಂದರೆ ತುಳುನಾಡ ಜನತೆ ಮನೆಯಿಂದ ಹೊರಬರಲೂ ಆಗದಂತಹ ಕಾಲ ಎಂಬುದು ವಾಡಿಕೆ. ಈ ಮಾಸದಲ್ಲಿ ಆಟಿ ಕಳಂಜ ಕುಣಿತ ತುಳುನಾಡಿನ ವಿಶೇಷ. ಆಟಿ ತಿಂಗಳಿನಲ್ಲಿ ಕೂಡಿಟ್ಟ ಧವಸಧಾನ್ಯಗಳು ಮುಗಿಯುವ ಕಾರಣ, ಲಭ್ಯ ಸಸ್ಯಮೂಲವೇ ಆಹಾರವಾಗುತ್ತದೆ. ಇದೇ ಸಂದರ್ಭದಲ್ಲಿ ಕಾಲಿಡುವ ಶೀತ, ಕೆಮ್ಮು ಹಾಗೂ ಜ್ವರಬಾಧೆ, ಸೊಳ್ಳೆಕಾಟ ಜನತೆಯನ್ನು ಕಂಗೆಡಿಸುತ್ತವೆ. ಇದನ್ನೆಲ್ಲಾ ನಿವಾರಿಸಲು ಆಟಿ ಕಳಂಜ ಬರುತ್ತಾನೆ ಎಂಬ ನಂಬಿಕೆ ಇದೆ.ಆಟಿಕಳಂಜ ಹೆಸರೇ ಸೂಚಿಸುವಂತೆ ಆಟಿ ತಿಂಗಳಿನಲ್ಲಿ […]