Satya Narayana Pooja at Peenya Dasarahalli
ಬೆಂಗಳೂರು: ತಾ.10.02.2019 ವಶಂತ ಪಂಚಮಿಯ ದಿನ ಬೆಂಗಳೂರು ದೇವಾಡಿಗ ಸಂಘದವರು ಸಮಾಜದ ಸಂಪರ್ಕ ಅಭಿಯಾನದ ಅಂಗವಾಗಿ ಬೆಂಗಳೂರಿನ ಜಾಲ ಹಳ್ಳಿಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ಬಹಳ ವಿಜೃಂಬಣೆಯಿಂದ ನಡೆಸಿದರು. ಸ್ಥಳೀಯ ದೇವಾಡಿಗರು ಅಪಾರ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಪೂಜೆಯ ಪ್ರಸಾದ ವಿತರಣೆಯ ನಂತರ ಸಮಾಜದ ಸಂಪರ್ಕ ಅಭಿಯಾನದ ಉದ್ಘಾಟನೆ ನಡೆಯಿತು. ಸಮಾಜದ ಅತೀ ಹಿರಿಯ ವ್ಯಕ್ತಿ ಶ್ರೀ ಕೋಟ ನರಸಿಂಹ ದೇವಾಡಿಗರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ನಾವೆಲ್ಲರೂ ದೇವರ ಸೇವೆ ಮಾಡುವ ದೇವಾಡಿಗರು ಎಂದರು.
ಸಭೆಯಲ್ಲಿ ಪೀಣ್ಯ, ಜಾಲಹಳ್ಳಿ ಹಾಗೂ ದಾಸರ ಹಳ್ಳಿಯ 10 ಹಿರಿಯ ಮಂದಿ ದೇವಾಡಿಗರನ್ನು ಸನ್ಮಾನ ಮಾಡಲಾಯಿತು.
1. Narasimha Devadiga
2. Narasimha Devadiga Kamakshi Palya
3. Sanjeev Rao
4. Krishna Devadiga Kirloskar
5. Rajanna Devadiga
6. Anand Devadiga
7. Nagaraj Devadiga
8. Krishna Devadiga
9. Chandramma
10. Prabhavati S Kudpi
ಶ್ರೀ ರಾಜು ದೇವಾಡಿಗ ನೇತ್ರತ್ವದಲ್ಲಿ 11 ಮಂದಿ ತಂಡ ರಚಿಸಿ ದೇವಾಡಿಗ ಸಂಘ ಬೆಂಗಳೂರಿನ ವಲಯ ಸಮಿತಿ ರಚಿಸಲಾಯಿತು.
ಪ್ರಾರಂಭದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ಗಣೇಶ ರಾಜುರವರು ಸ್ವಾಗತಿಸಿದರು. ಚಂದ್ರ ಎಸ್.ಎಮ್, ಪ್ರಸಾಂತ ಮತ್ತಿತರರು ಸಂದರ್ಭಚೋತಿತವಾಗಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಕೆ.ಚಂದ್ರಶೇಖರರವರು ಮಾತನಾಡುತ್ತಾ ದೇವಾಡಿಗ ಸಮಾಜ ಪ್ರಗತಿಯತ್ತ ಮುನ್ನುಗ್ಗುತ್ತಿದೆ ಯಾವುದೇ ಕೀಳರಿಮೆ ನಮಗೆ ಬೇಡ ಅಂದರು.
ಸಭೆಯಲ್ಲಿ ಶ್ರೀ ದಾಮೋದರ ಚೈತನ್ಯ ಸ್ವಾಮಿಜಿಯವರು ಸಂದೇಶ ವಾಚಿಸಿದರು.
ಸಂಘದ ಕಾರ್ಯದರ್ಶಿ ಶ್ರೀ ಗಣೇಶ ದೇವಾಡಿಗರು ಕಾರ್ಯಕ್ರಮ ಸಂಯೋಜಿಸಿದರು.