THENE HABBA 2022 -ತೆನೆ ಹಬ್ಬ – ಕುರಲ್ ಪರ್ಬ
ತೆನೆ ಹಬ್ಬ – ಕುರಲ್ ಪರ್ಬ
ನಮ್ಮದು ಕೃಷಿ ಪ್ರಧಾನ ಸಮಾಜ, ಪ್ರಕೃತಿ, ನಮ್ಮ ದೈವ, ದೇವಸ್ಥಾನ ಮತ್ತು ಕೃಷಿ ನಮ್ಮೆಲ್ಲರ ಪೂರ್ವಿಕರ ಬದುಕು. ಜೀವನೋಪಾಯಕೆ ಕೃಷಿಯನ್ನು ಅವಲಂಬಿಸಿ ಮತ್ತು ಕೃಷಿ ಕಾರ್ಮಿಕರಾಗಿ ಬದುಕನ್ನು ಕಟ್ಟಿಕೊಂಡವರು. ನಮ್ಮ ಹಬ್ಬಹರಿದಿನಗಳು ಕೂಡ ಸಹಜವಾಗಿ ನಿಸರ್ಗಕ್ಕೆ ಹೊಂದಿಕೊಂಡಿರುತ್ತದೆ.
ನಾವೆಲ್ಲರೂ ದುಡಿಯುವ ಗದ್ದೆಯಲ್ಲಿ ಹಾಕಿದ ಬತ್ತದ ನಾಟಿಯಿಂದ ಬೆಳೆದ ಫಲವನ್ನು ಭೂತಾಯಿಗೆ ಪೂಜಿಸಿ ವಂದಿಸುತ್ತಾ, ಹೊಸ ಅಕ್ಕಿಯನ್ನು ಮನೆಯ ಅಂಗಳದ ತುಳಸಿ ಕಟ್ಟೆಯ ಮುಂದೆ ಪೂಜಿಸಿ ಮನೆಯನ್ನು ತುಂಬಿಸುವ ನಮ್ಮ ದಕ್ಷಿಣ ಕನ್ನಡಲ್ಲಿ ತೆನೆ ಹಬ್ಬ/ ಕುರಲ್ ಪರ್ಬ ಮೂಲಕ ಸಂಭ್ರಮಿಸುದು ಸಂಪ್ರದಾಯ.
ಇಂತಹದೇ, ಆಚರಣೆಯನ್ನು ದೇವಾಡಿಗ ಸಂಘ (ರಿ) ಬೆಂಗಳೂರು ಆದಿತ್ಯವಾರ ತಾರೀಖು: 10 -10-2021 ರಂದು ವಿಜೃಂಭಣೆಯಿಂದ ತೆನೆ ಹಬ್ಬ / ಕುರಲ್ ಪರ್ಬ ಆಚರಿಸಲಾಯಿತ್ತು.
ಮಹಿಳಾ ಘಟಕದ, ಶ್ರೀಮತಿ. ರೇಖಾ ಸುರೇಶ್ ಅಧ್ಯಕ್ಷರೊಂದಿಗೆ, ಶ್ರೀಮತಿ ಸುಮತಿ ಸುಧಾಕರ್, ಶ್ರೀಮತಿ. ಗಾಯತ್ರಿ ಚಂದ್ರಶೇಖರ್, ಶ್ರೀಮತಿ. ಜಯಂತಿ ರಮೇಶ್ ಮತ್ತು ಶ್ರೀಮತಿ ಜಲಜಾ ಕೇಶವ್ ಪೂಜಾ ಕಾರ್ಯದಲ್ಲಿ ಪಾಲುಗೊಂಡರು. ವಿಶೇಷವಾಗಿ ಪೂಜಾ ವಿಧಿವಿಧಾನಗಳನ್ನು ನವದಂಪತಿಗಳಾದ ಶ್ರೀ. ತೇಜಸ್ ಸುಧಾಕರ್ ಮತ್ತು ಶ್ರೀ ಮತಿ. ಅರ್ಪಿತಾ ತೇಜಸ್ ನಡಸಿಕೊಟ್ಟರು. ಶ್ರೀ ಕೆ ಚಂದ್ರಶೇಖರ್, ಅಧ್ಯಕ್ಷರು ಅವರ ಪತ್ನಿ ಶ್ರೀಮತಿ. ಗಾಯತ್ರಿ ಚಂದ್ರಶೇಖರ್ ಜೊತೆಯಲ್ಲಿ ತೆನೆಗೆ ಆರತಿ ಬೆಳಗಿದರು. ಶ್ರೀಮತಿ. ಜಲಜಾ ಕೇಶವ್ ರವರ ಭಕ್ತಿ ಗೀತೆಯ ನಂತರ, ಸೇರಿದ ಸಮಾಜ ಬಾಂಧವರು ಎಲ್ಲರಿಗು ಸಮೃದ್ಧಿ ನೀಡೆಂದು ದೇವರಲ್ಲಿ ಕೈಮುಗಿದು ಸಾಮೂಹಿಕವಾಗಿ ಪ್ರಾರ್ಥಿಸಲಾಯಿತ್ತು.
ಸಂಪ್ರಾಯದೆಂತೆ ಹೊಸ ಅಕ್ಕಿಯನ್ನು ಮನೆ ತುಂಬಿಸಿಕೊಂಡ ನಂತರ, ಹಬ್ಬದ ಊಟದ ಸಂಭ್ರಮ, ಬಾಳೆ ಎಲೆಯಲ್ಲಿ ಬಡಿಸಿದ ಊಟ ಎಲ್ಲರು ಆನಂದಿಸಿದರು. ಶಾವಿಗೆ, ಕಾಯಿಹಾಲು ಮತ್ತು ಪತ್ರೋಡೆ ಇದದ್ದು ವಿಶೇಷ. ಹಬ್ಬದ ಊಟದ ಸಂಪೂರ್ಣ ವ್ಯವಸ್ಥೆಯ ಜವಾಬ್ದಾರಿಯನ್ನು ವಹಿಸಿಕೊಂಡ ಶ್ರೀಧರ ದೇವಾಡಿಗ ರವರ ಶ್ರಮದಾನ ಶ್ಲಾಘನೀಯ.
ತೆನೆ ಹಬ್ಬದ ಆಚರಣೆಯ ನಂತರದ ಕಾರ್ಯಕ್ರಮದಲ್ಲಿ, ಮದ್ಯಾಹ್ನ ಸಭಾ ಕಾರ್ಯಕ್ರಮ ನಡೆಯಿತ್ತು. ಶ್ರೀ ಕೆ ಚಂದ್ರಶೇಖರ್, ಅಧ್ಯಕ್ಷರು ಮುಖ್ಯ ಅತಿಥಿ ಹಾಗು ಸಂಪನ್ಮೂಲ ವ್ಯಕ್ತಿ ಡಾ. ಪಿ. ಎಸ್. ಶ್ರೀಕಂಠಮೂರ್ತಿ, ಪ್ರೊಫೆಸರ್, ಕೃಷಿ ಅರ್ಥಶಾಸ್ತ್ರ ವಿಭಾಗ, GKVK ವೇದಿಕೆ ಮೇಲೆ ಸ್ವಾಗತಿಸಿ ಸಭಿಕರರಿಗೆ ಅವರನ್ನು ಪರಿಚಯಿಸಿದರು. ಮುಖ್ಯ ಅತಿಥಿ, ಡಾ. ಪಿ. ಎಸ್. ಶ್ರೀಕಂಠಮೂರ್ತಿ, ಕೃಷಿಗೆ ಸಂಬಂಧ ಮಾತುಗಳನ್ನು ಆಡಿದರು. ದಕ್ಷಿಣ ಕನ್ನಡ ದೇವಸ್ಥಾನಗಳು ಬರಿ ಧಾರ್ಮಿಕ ಕ್ಷೇತ್ರಗಳಲ್ಲ, ಅದು ದಿವ್ಯ ಶಕ್ತಿ ಕೇಂದ್ರ ಎಂದು ತಮ್ಮ ಮಾತನ್ನು ಆರಂಭಿಸಿ, ಸಂಪದ್ಭರಿತ ದೇಶವನ್ನು ಆಂಗ್ಲರು ಕೃಷಿಯನ್ನು ಪರಿಗಣಿಸಿದ ರೀತಿ , ಬೆಂಗಾಲ ಕ್ಷಾಮ, ಸ್ವಾತಂತ್ರದ ನಂತರದ ಭಾರತ ದೇಶದ ಆಹಾರ ಉತ್ಪಾದನೆ, ಹಸಿರು ಕ್ರಾಂತಿ, ಇಂದಿನ ಮುಂದಿನ ಕಾಲಕ್ಕೆ ಕೃಷಿಯ ಅಗತ್ಯತೆ ಬಗ್ಗೆ ವಿವರಿಸಿದರು ಹಾಗು ಮಾಹಿತಿ ನೀಡುತ್ತಾ, ಈ ಭೂಮಿಯನ್ನು ನಾವು ಹಿಂದಿನವರಿಂದ ಪಡೆದ ಬಳುವಳಿ ಅಲ್ಲ, ಅದು ನಮ್ಮ ಮುಂದಿನ ಪೀಳಿಗೆಯವರಿಂದ ಪಡೆದ ಸಾಲ ಎಂದು ಅವರ ಮಾತಿನಲ್ಲಿ ತಿಳಿಸಿದರು. ಸಭಾ ಕಾರ್ಯಕ್ರಮದಲ್ಲಿ ಸಂಘದ ಸಲಹೆಗಾರರು ಆದ ಶ್ರೀ. ಎಚ್. ಎಸ್. ದೇವಾಡಿಗ ಮತ್ತು ಶ್ರೀ. ಗಣೇಶ್ ರಾಜು ರವರು ಉಪಸ್ಥಿತಿಯಿದ್ದರು. ಸಂಜೆ ಸೃಷ್ಠಿ ಕಲಾ ವೃಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ತೆನೆ ಹಬ್ಬ/ ಕುರಲ್ ಪರ್ಬದ ಸಂಯೋಜನೆಯಿಂದ ಅರಂಭಿಸಿ, ಊರಿನಿಂದ ತೆನೆ/ಕುರಲ್ ಮತ್ತು ಪೂಜಾ ಸಾಮಗ್ರಿಗಳನ್ನು ತರಿಸುವ ಜವಾಬ್ದಾರಿ ವಹಿಸಿಕೊಂಡ ಸಂಘದ ಉಪಾಧ್ಯಕ್ಷರಾದ ಶ್ರೀ. ಎಂ. ಸುಧಾಕರ್ ಹಾಗು ಶ್ರೀಮತಿ. ಸುಮತಿ ಸುಧಾಕರ್, ಕಾರ್ಯದರ್ಶಿ, ಮಹಿಳಾ ಘಟಕ, ರವರಿಗೆ ಧನ್ಯವಾದ. ಹಾಗೆಯೇ, ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲುಗೊಂಡ ಉಪಾಧ್ಯಕ್ಷರಾದ ಶ್ರೀ. ರಮೇಶ್ ವಂಡ್ಸೆ, ಮತ್ತು ನೀಡಿದ ಚಟುವಟಿಯನ್ನು ನಿರ್ವಹಿಸಿದ ಸದಸ್ಯರುಗಳಾದ ಶ್ರೀ ಗಣೇಶ್ ಸದಾಶಿವ್, ಜೊತೆ ಕಾರ್ಯದರ್ಶಿ, ಶ್ರೀ. ರಾಮಚಂದ್ರ ದೇವಾಡಿಗ, ಶ್ರೀ. ಕೇಶವ್ ನಾರಾಯಣ್ ರಾವ್ , ಶ್ರೀ. ಶುಭಾಷ್ ದೇವಾಡಿಗ, ಶ್ರೀ. ಲೋಕು ಕುಡ್ಲ, ಶ್ರೀ. ರಾಜೇಶ್ ದೇವಾಡಿಗ ಫೋಟೋ ವ್ಯವಸ್ಥೆ ಮಾಡಿದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ಪಾಲುಗೊಂಡ ನಮ್ಮ ಎಲ್ಲ ಸಮಾಜ ಬಾಂಧವರಿಗೆ ಧನ್ಯವಾದ.
ರಜನಿಕಾಂತ್ ಎಸ್ ಕುಡ್ಪಿ
ಪ್ರಧಾನ ಕಾರ್ಯದರ್ಶಿ,
ದೇವಾಡಿಗ ಸಂಘ (ರಿ) ಬೆಂಗಳೂರು