#All News #Sangha News

Arybhata International Awardees

Devadiga Sangha Bangalore New Office Bearers with Committee Members and Members of Devadiga Sangha Organised Honoring Ceremony of Arybhata International Awardees Mr Dinesh ChandraShekar Devadiga Nagoor and Mr Mahesh Moily at Gokul Veg DVG Road Basavanagudi Bangalore on 23/05/2018 We Thank you all for Making This Event an Memorable One

ಎಷ್ಟು ಚಂದದ ಕಾರ್ಯಕ್ರಮ ಅಲ್ವ ನಿನ್ನೆ..ದೇವಾಡಿಗ ಸಂಘ ಬೆಂಗಳೂರಿನ ಸರ್ವರೂ ಸೇರಿ ಪ್ರೀತಿ-ಸ್ನೇಹ ಸಮಾಜದ ಹಿತ.. ಸಂಘದ ಕಟ್ಟಡದ ಕನಸು.. ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನ ಶ್ರಮ ಸಂಪೂರ್ಣ ಸಾರ್ಥಕವೆಂದೇ ಹೇಳಬಹುದು, ಸನ್ಮಾನ ಪುರಸ್ಕ್ರತರಾದ ಶ್ರೀಯುತ ದಿನೇಶ್ ದೇವಾಡಿಗರವರು ಮಾತಿನಲ್ಲಿ ಎಲ್ಲದಕ್ಕಿಂತಲೂ ಬೆಲೆಬಾಳುವಂತದ್ದು, ಹಣಕ್ಕಿಂತಲೂ ಮುಖ್ಯವಾದದ್ದು “ಸಮಯ” ಆ ಸಮಯವನ್ನು ಎಲ್ಲರೂ ಜೊತೆಗೂಡುವಲ್ಲಿ.. ದೇವಾಡಿಗ ಸಮಾಜದ ಕೊನೇಯ ವ್ಯಕ್ತಿಯನ್ನೂ ಸಂಪರ್ಕಿಸುವಲ್ಲಿ.. ಸಮಾಜದ ವಿಚಾರವನ್ನು ತಿಳಿಸುವುದಕ್ಕೆ ವಿನಿಯೋಗಿಸುವಲ್ಲಿ ಶ್ರಮಿಸಿದಾಗ ಯಶಸ್ಸು ಜೊತೆಗೂಡುತ್ತದೆ ಎಂಬ ಮಾತು ಎಷ್ಟು ಸತ್ಯ ಅಲ್ವೇ… ನಮ್ಮ ಸಮಾಜದವರು ಆರ್ಯಭಟ ಪ್ರಶಸ್ತಿ ಪಡೆದಾಗ ಅವರನ್ನು ಪ್ರೀತಿಯಿಂದ ಅಹ್ವಾನಿಸಿ.. ಗೌರವದಿಂದ ಪ್ರೋತ್ಸಾಹಹಿಸಿದಲ್ಲಿ ನಾವು ವಿನಿಯೋಗಿಸಿದ ಆ ಸ್ವಲ್ಪ ಸಮಯ ನಮ್ಮ ಸಂಘದ ಎಲ್ಲಾ ಪದಾಧಿಕಾರಿಗಳಲ್ಲಿ ನವ ಚೈತನ್ಯವನ್ನು ಮೂಡಿಸಿರುವುದು ಸತ್ಯ.. ನಿನ್ನೆ ನಮ್ಮ ಸಂಘದ ನೂತನ ಅಧ್ಯಕ್ಷರ ನುಡಿಯಲ್ಲಿ ಲವಲವಿಕೆಯಿತ್ತು .. ಉಪಾಧ್ಯಕ್ಷರ ನುಡಿಯಲ್ಲಿ ಬಹಳಷ್ಟು ಕನಸುಗಳಿತ್ತು.. ನಮ್ಮ ಟ್ರೆಸರರ್ ಎಲ್ಲರನ್ನೂ ಬಾಗಿಲಲ್ಲಿ ಸ್ವಾಗತಿಸುವಲ್ಲಿ ಅಭಿಮಾನವ-ಪ್ರೀತಿಯಿತ್ತು.. ಪ್ರಶಸ್ತಿ ಪತ್ರ ಓದಿದ ನಮ್ಮವರಲ್ಲಿ ಗಣ್ಯರ ಮೇಲೆ ಬಹಳಷ್ಟು ಗೌರವ-ಆಶೆ-ಆಶಯಗಳು ಎದ್ದು ಕಾಣುತ್ತಿತ್ತು.. ರುಚಿಯಾದ ಊಟ ಸಂಪೂರ್ಣವಾಗಿ ತುಂಬಿದ ಚಂದವಾದ ಗೋಕುಲ್ ವೆಜ್ ಹಾಲ್.. ದೇವಾಡಿಗ ಸಂಘ ಬೆಂಗಳೂರು ಹೊಸ ಚೈತನ್ಯವನ್ನು ಪಡೆದಿರುವುದಕ್ಕೆ ಸಾಕ್ಷಿಯಾಯಿತು.

ಪ್ರೀತಿಯಿಂದ
-ಲೋಕು ಕುಡ್ಲ 

Leave a comment

Your email address will not be published. Required fields are marked *