Aatidonjidina -ಆಟಿಡ್ ಒಂಜಿ ದಿನ -2023
ದೇವಾಡಿಗ ಸಂಘ (ರಿ ) ಬೆಂಗಳೂರು
ದಿನಾಂಕ 30/07/2023 ನಡೆದ ಆಟಿಡ್ ಒಂಜಿ ದಿನ (ಆಷಾಡದ ಲ್ಲಿ ಒಂದು ದಿನ ) ಕಾರ್ಯಕ್ರಮ.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ವವಿಖ್ಯಾತ ಹೃದಯ ತಜ್ಞರಾದ ಶ್ರೀಯುತ ಡಾ|ಪ್ರವೀಣ್ ದೇವಾಡಿಗ (ನಾರಾಯಣ ಹೃದಯಾಲಯ)ರವರು ಉದ್ಘಾಟಿಸಿ ಸಮಾಜ ಬಾಂಧವರಿಗೆ ಹಿತವಚನವನ್ನು ಹಾಗೂ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಎನ್ ರಮೇಶ್ ದೇವಾಡಿಗ ವಂಡ್ಸೆ, ಸಮಾಜದ ಏಳಿಗೆಗೆ ಎಲ್ಲಾ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ, ಶ್ರಮದ ಅವಶ್ಯಕತೆ ಹಾಗೂ ಮುಂದಿನ ನಡೆಯ ಬಗ್ಗೆ, ವಿವರಣೆ ನೀಡಿದರು. ಹೊಸ ಸಮಿತಿಯ ಮೇಲೆ ಇರಿಸಿದ ಭರವಸೆಯನ್ನು ಸ್ಮರಿಸಿದರು. ಮುಂದೆಯೂ ಕೂಡ ಇದಕ್ಕಿಂತ ಹೆಚ್ಚಿನ ಸಹಕಾರವನ್ನು ಕೋರಿದರು.
ದೇವಾಡಿಗ ಸಂಘ ಬೆಂಗಳೂರು, ಇದರ ಮಾಹಿತಿಗಾಗಿ ಶ್ರೀ ಪವನೇಶ್ ದೇವಾಡಿಗ ನೇತ್ರತ್ವದ
https://devadigasanghabangalore.in
ವೆಬ್ ಸೈಟ್ ನ್ನು
ಮುಖ್ಯ ಅತಿಥಿ ಶ್ರೀ ಡಾ| ಪ್ರವೀಣ್ ಕುಮಾರ್ ನೆರವೇರಿಸಿದರು.
ಆಷಾಡದ ಆಚರಣೆಯ ಜೊತೆಯಲ್ಲಿ ಕರಾವಳಿಯ ಸಂಸ್ಕೃತಿಯನ್ನು ಅನಾವರಣಗೊಳಿಸಲಾಯಿತು.
ಸಮಾಜದ ಮಹಿಳೆಯರು ಪ್ರತಿ ಸಾರಿಯಂತೆ ತಮ್ಮ ತಮ್ಮ ಮನೆಯಿಂದ ವಿಷೇಷವಾದ ಸುಮಾರು 50 ಬಗೆಯ ತಿಂಡಿ ತಿನಿಸುಗಳನ್ನು ಮಾಡಿ ತಂದು ಬಡಿಸಿರುವುದು ಈ ಕಾರ್ಯಕ್ರಮದ ವಿಶೇಷವಾಗಿತ್ತು.
ಮಧ್ಯಾಹ್ನ ಸಮಾಜ ಬಾಂಧವರಿಗೆ ಕರಾವಳಿ ಶೈಲಿಯ ವಿಷೇಷವಾದ ಭೋಜನವನ್ನು ಏರ್ಪಡಿಸಲಾಗಿತ್ತು.
ಭೋಜನಾನಂತರ ಮನೋರಂಜನಾ ಕಾರ್ಯಕ್ರಮವನ್ನು ವಿಶೇಷವಾಗಿ
“ಕಾಮಿಡಿ ಕಿಲಾಡಿ” ಗಳು ಖ್ಯಾತಿಯ ಕಲಾವಿದರಿಂದ ಹಾಸ್ಯ ನಾಟಕವನ್ನು ಏರ್ಪಡಿಸಲಾಗಿತ್ತು.
ಹಾಗೂ “ಯಶಸ್ವಿ ಡ್ಯಾನ್ಸ್ ಗ್ರೂಪ್”, ಮಂಗಳೂರು ಇವರಿಂದ ಪುಟಾಣಿ ಮಕ್ಕಳ ನೃತ್ಯ ವೈಭವ ಮಂಗಳೂರು ಶೈಲಿ ಹಾಗೂ ಜಾನಪದ ಕುಣಿತಗಳು ಪ್ರೇಕ್ಷಕರ ಮನದುಂಬಿದವು.
ಶ್ರೀ ಚಂದ್ರಶೇಖರ್ ದೇವಾಡಿಗ ಉಳ್ಳೂರು ರವರ ಗಾಯನ ಸೊಗಸಾಗಿತ್ತು. ಸಮುದಾಯದ ಉತ್ತಮ ಪ್ರತಿಭೆಗಳನ್ನು. ಹಿರಿಯರನ್ನು ಗುರುತಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ
ಮಾಜಿ ಅಧ್ಯಕ್ಷರುಗಳಾದ.
ಶ್ರೀ ರಘು ಶೇರಿಗಾರ್,
ಶ್ರೀ ಚಂದ್ರಶೇಖರ. ಕೆ, ಸಂಘದ ಮಾರ್ಗದರ್ಶಕರು ಸಲಹೆಗಾರರು ಎಚ್ ಎಸ್ ದೇವಾಡಿಗ, ಮಾಜಿ ಕಾರ್ಯದರ್ಶಿಗಳಾದ ಗಣೇಶ ಆರ್. ಶ್ರೀ ರಜನಿಕಾಂತ್ ಎಸ್ ಕುಡ್ಪಿ, ಉಪಾಧ್ಯಕ್ಷರಾದ ಶ್ರೀ ಸುಧಾಕರ್, ಶ್ರೀ ಕೇಶವ ನಾಯಯಣ ರಾವ್,
ಪ್ರಧಾನ ಕಾರ್ಯದರ್ಶಿ ಶ್ರೀ ವಿಶು ಹಿರಿಯಡ್ಕ,
ಕೋಶಾಧಿಕಾರಿ ಶ್ರೀ ಚಂದ್ರ ಎಸ್. ಎಮ್,ಸಂಘಟನಾ ಕಾರ್ಯದರ್ಶಿ ಶ್ರೀ ಶ್ರೀಧರ್ ದೇವಾಡಿಗ
ಜೊತೆ ಕಾರ್ಯದರ್ಶಿಗಳಾದ ಶ್ರೀ ಗಣೇಶ ಕಿರೀಮಂಜೇಶ್ವರ, ಶ್ರೀ ಶಿವಶಂಕರ್,
ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ರೇಖಾ ಸುರೇಶ್,
ಕಾರ್ಯದರ್ಶಿ ಶ್ರೀಮತಿ ಮಮತಾ ಉಳ್ಳಾಲ್,
ಯುವ ಘಟಕದ ಅಧ್ಯಕ್ಷರಾದ ಶ್ರೀ ತೇಜಸ್ ಸುಧಾಕರ್, ಹಾಗೂ ಆಡಳಿತ ಸಮಿತಿಯ ರಾಮಚಂದ್ರ ದೇವಾಡಿಗ, ಪ್ರಕಾಶ್ ಎಚ್. ಕೇಶವ ಕಮ್ಮನಹಳ್ಳಿ. ಪ್ರಕಾಶ್ ಹೊಸಕೇರೇಹಳ್ಳಿ ರಂಜಿತ್ ಹೊಸಕೇರೇಹಳ್ಳಿ. ಇತರ ಸದಸ್ಯರು. ವಿವಿಧ ಸಂಘದ ಪಧಾಧಿಕಾರಿಗಳು. ಹಾಗೂ ಸಂಘದ ಹಿರಿಯರು, ಮಹಿಳೆಯರು, ಯುವಕರು ಪುಟಾಣಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ಪುಟಾಣಿ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಮಾಜ ಭಾಂದವರಿಗಾಗಿ ವಧು ವರರ ನೋಂದಣಿಯನ್ನು ಏರ್ಪಡಿಸಲಾಗಿತ್ತು. ಸದಸ್ಯತ್ವ ನೋಂದಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಇದರ ನೇತ್ರತ್ವವನ್ನು ಸುರಭಿ ದೇವಾಡಿಗ ವಹಿಸಿದ್ದರು.
ಕಾರ್ಯಕ್ರಮವನ್ನು ಸಂಘದ ತಾಂತ್ರಿಕ ಕಾರ್ಯದರ್ಶಿಯಾದ ಶ್ರೀ ಪವನೇಶ್ ರವರು ನಡೆಸಿಕೊಟ್ಟರು. ಪ್ರಾರ್ಥನೆ ಯನ್ನು ಮಾನಸ ಮಹೇಶ್ ನೆರವೇರಿಸಿದರು. ಕೊನೆಯಲ್ಲಿ ಮಾಜಿ ಕಾರ್ಯದರ್ಶಿ ಶ್ರೀ ರಜನಿಕಾಂತ್ ಕುಡ್ಪಿ ಕಾರ್ಯಕ್ರಮದ ಯಶಶ್ವಿಗೆ ಶ್ರಮಿಸಿದ ಎಲ್ಲರನ್ನೂ ಅಭಿನಂದಿಸಿ. ಧನ್ಯವಾದ ಕಾರ್ಯಕ್ರಮ ನೆರವೇರಿಸಿದರು.
ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಬಹಳ ಸುಂದರವಾಗಿ
ಶ್ರೀ ಗಣೇಶ್ ದೇವಾಡಿಗ ಹಾಗೂ ಕುಮಾರಿ ಬಿಂದಿಯಾ.
ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಸೊಗಸಾಗಿ ಶ್ರೀ ಲೋಕು ಕುಡ್ಲ ನೆರವೇರಿಸಿಕೊಟ್ಟರು.ಸುಂದರ ಕ್ಸಣಗಳ ಛಾಯಾಚಿತ್ರವನ್ನು ಗುರು ದೇವಾಡಿಗ ಸೆರೆ ಹಿಡಿದರು
ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದ ಎಲ್ಲರಿಗೂ. ಭಾಗವಹಿಸಿ ಸಹಕರಿಸಿದ ಸಮಾಜ ಭಾಂದವರಿಗೂ.ಮಾಜಿ ಪದಾಧಿಕಾರಿಗಳಿಗೂ. ನನ್ನ ಪ್ರೀತಿಯ ಸಮಿತಿಯ ಸದಸ್ಯರಿಗೂ. ಪ್ರಧಾನ ಕಾರ್ಯದರ್ಶಿ ವಿಶು ರವರಿಗೂ. ಸಾಕಷ್ಟು ಶ್ರಮವಹಿಸಿ ಶುಚಿ ರುಚಿಯಾದ ತಿಂಡಿ ತಿನಿಸುಗಳನ್ನು ಮಾಡಿ ಬಡಿಸಿದ ಸಂಘದ ಹೆಮ್ಮೆಯ ಮಹಿಳೆಯರಿಗೂ ಅದರ ನೇತ್ರತ್ವ ವಹಿಸಿದ ಮಹಿಳಾ ಘಟಕದ ಅಧ್ಯಕ್ಷರಾದ ರೇಖಾ ಸುರೇಶ್ ರವರಿಗೂ. ಕಾರ್ಯಕ್ರಮಕ್ಕೆ
ಹೆಚ್ಚಿನ ಶ್ರಮವಸಿದ ಯುವ ಘಟಕದ ಅಧ್ಯಕ್ಷರಾದ ತೇಜಸ್ ರವರಿಗೂ ಹೆಚ್ಚಿನ ಶ್ರಮ ವಹಿಸಿದ ಶ್ರೀಧರರವರು. ಸುಧಾಕರವರಿಗೂ. ಮಮತಾರವರಿಗೂ. ಚಂದ್ರುರವರಿಗೂ ವಿಶೇಷ ವಾಗಿ ಪವನೇಶ್ ರವರಿಗೂ. ಹಾಗೂ ಧನ ಸಹಾಯ ನೀಡಿದ ಸಮಿತಿಯ ಎಲ್ಲಾ ಸದ್ಯಸರಿಗೂ ಮತ್ತು ಮಂಜುನಾಥ್ ದೇವಾಡಿಗ ಮಾರಣಕಟ್ಟೆ ಅವರಿಗೂ ನನ್ನ ವಯಕ್ತಿಕ ಅಭಿನಂದನೆಗಳು ಮತ್ತು ಧನ್ಯವಾದಗಳು
ಎನ್ ರಮೇಶ್ ದೇವಾಡಿಗ ವಂಡ್ಸೆ
ಅಧ್ಯಕ್ಷರು ದೇವಾಡಿಗ ಸಂಘ (ರಿ )
ಬೆಂಗಳೂರು